ಯಾರೇ ರಂಗನ ಕರೆಯ ಬಂದವರು ||

ಯಾರೇ ಕೃಷ್ಣನ ಕರೆಯ ಬಂದವರು ||

|| ಯಾರೇ ರಂಗನ ||

ಗೋಪಾಲಕೃಷ್ಣನ ಪಾಪವಿನಾಶನ ||

ಈ ಪರಿಯಿಂದಲಿ ಕರೆಯ ಬಂದವರು ||

|| ಯಾರೇ ರಂಗನ ||

ವೇಣುವಿನೋದನ ಪ್ರಾಣಪ್ರಿಯನಾ ||

ಜಾಣೆಯರರಸನ ಕರೆಯ ಬಂದವರು ||

|| ಯಾರೇ ರಂಗನ ||

ಕರಿರಾಜ ವರದನ ಪರಮಪುರುಷನ ||

ಪುರಂದರವಿಠಲನ ಕರೆಯ ಬಂದವರು ||

|| ಯಾರೇ ರಂಗನ ||

***