ಬಾರಾ ಶ್ರೀ ಗಣಪತಿ

ವಿದ್ಯಾವಾರಿಧಿ  ಬಾರಾ ಮುದ್ದು ಗಣಪತಿ ||

 ||ಪ ||

ಎನ್ನ ನಾಲಿಗೆ ತೊಡರನು ಬಿಡಿಸಿ 

ನುಡಿಸೆ ನೀ .. ಒಲಿದು ಬಾ.. |

 || ಬಾರಾ ||

ವೇದವ್ಯಾಸಗೆ ಭಾರತ ಬರೆದು 

ವೇಿ ವ್ಯಾಸನ ಸೋಲಿಸಿದವನೇ ||

ವೇದಪುರುಷಗೆ ಗುರುವಾದವನೇ 

ವಿಶ್ವೇಶ್ವರನ ಕುಮಾರ ||

ಬಾರಾ ಗಣೇಶಾ |

|| ಬಾರಾ ||

ಚಿನ್ಮಯ ರೂಪನೇ ಕುಣಿ ಕುಣಿ ಬಾರಾ

ಮಂಗಳ ರೂಪನೇ ನಲಿನಲಿ ಬಾರಾ  ||

ವಿಘ್ನೇಶ್ವರನೇ ಬಾರಾ  

ಈಶ್ವರಸುತನೇ ಬಾರಾ ||

ಬಾರಾ ಮೈದೋರಾ  |

|| ಬಾರಾ ||

ಕುಲುಕುಲು ಕುಣಿಯುವ ಕೊರಳಿನ ಹಾರದಿ

ಕಿಣಿ ಕಿಣಿ ಕಿಣಿರೆಂಬ ಕಂಕಣ ರವದಿ ||

ಲುಲು ಘಲಿರೆಂಬ ಗೆಜ್ಜೆಯ ನಾದದಿ ||

ನಾಟ್ಯವನಾಡುತ ನಟರಾಜ ಸುತ |

|| ಬಾರಾ ||

***