ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ
ನೀ ಹುಡುಕೋ ದೈವ ನೀನೆ ತತ್ವಮಸಿಯೇ | ಅಯ್ಯಪ್ಪ |
ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ
ನೀ ಹುಡುಕೋ ಸ್ವಾಮಿ ನೀನೇ ತತ್ವಮಸಿಯೇ |
||ಪ||
ಸ್ವಾಮಿ ಭಕ್ತನಾಗಿ ಭಕ್ತ ಸ್ವಾಮಿಯಾಗಿ ||
ಸ್ವಾಮಿ ಭಕ್ತನಾಗುವುದೇ ತತ್ವಮಸಿಯೇ
|| ತತ್ವಮಸಿಯೇ ||
ಗುರುವೆ ಶಿಷ್ಯನಾಗಿ ಶಿಷ್ಯ ಗುರುವಾಗಿ ||
ಗುರುಶಿಷ್ಯರು ಸಮರೆಂಬುದೇ ತತ್ವಮಸಿಯೇ |
|| ತತ್ವಮಸಿಯೇ ||
ಹರಿಯು ಹರನಾಗಿ ಹರನೆ ಹರಿಯಾಗಿ ||
ಹರಿಯು ನೀನೇ ಹರನು ನೀನೇ ತತ್ವ ಮಸಿಯೇ |
|| ತತ್ವಮಸಿಯೇ ||
ಭಕ್ತಿ ಭಾವ ಬೆರೆಸಿ
ಮುಕ್ತಿ ದಾಹ ಹರಿಸಿ ||
ಭಕ್ತಿಯಿಂದ ಮುಕ್ತಿ ಪಡೆಯೋ ತತ್ವಮಸಿಯೇ |
|| ತತ್ವಮಸಿಯೇ ||
ತುಪ್ಪ ದೀಪವಾಗಿ
ದೀಪವು ಬೆಳಕಾಗಿ ||
ಬೆಳಗೋ ಮಕರ ಜ್ಯೋತಿಯೇ ತತ್ವಮಸಿಯೇ |
|| ತತ್ವಮಸಿಯೇ ||
ಜೀವಾತ್ಮವು ನೀನೆ
ಪರಮಾತ್ಮವು ನೀನೆ ||
ಜೀವಾತ್ಮದ ಪರಮಾತ್ಮವೇ ತತ್ವಮಸಿಯೇ
|| ತತ್ವಮಸಿಯೇ ||
ಇರುಮುಡಿಯು ಸೇರಿ
ಪಾದಪಡಿಯ ಏರಿ ||
ತಲೆಬಾಗಿ ಪಡಿಯೆರಲು ತತ್ವಮಸಿಯೇ |
|| ತತ್ವಮಸಿಯೇ ||
***