ಸ್ವಾಮೀ ಮುಖ್ಯಪ್ರಾಣ
ನಿನ್ನ ಮರೆವರ ಗಂಟಲ ಗಾಣ ||
ಹಿಡಿದ್ಯೋ ರಾಮನ ಚರಣ
ನೀನ್ಹೌದೌದೊ ಜಗತ್ಪ್ರಾಣ ||ಪ||
ಸಂಜೀವಿನಿ ಪರ್ವತವ
ನೀನಂಜದೆ ತಂದ್ಯೋ ದೇವ ||
ಅಂಜನೆಸುತ ಸದಾಕಾವ
ಹೃತ್ಕಂಜವಾಸ ಸರ್ವಜೀವ ||
|| ಸ್ವಾಮೀ ಮುಖ್ಯಪ್ರಾಣ ||
ಏಕಾದಶಿಯ ರುದ್ರ
ನೀ ಒಯ್ದ್ಯೋ ರಾಮರ ಮುದ್ರ ||
ಸಕಲವಿದ್ಯಾಸಮುದ್ರ
ನೀನ್ಹೌದೌದೋ ಬಲಭದ್ರ ||
|| ಸ್ವಾಮೀ ಮುಖ್ಯಪ್ರಾಣ ||
ವೈಕುಂಠದಿಂದ ಬಂದು
ನೀ ಪಂಪಾಕ್ಷೇತ್ರದಿ ನಿಂದು ||
ಯಂತ್ರೋದ್ಧಾರಕನೆಂದು
ಪುರಂದರವಿಠಲ ಸಲಹೆಂದು ||
|| ಸ್ವಾಮೀ ಮುಖ್ಯಪ್ರಾಣ ||