ಶ್ರೀ ಗುರುವೇ ಅರುವೆ ಶರಣಾಗಿ ಬರುವೆ 

ಕರುಣೆಯನು ಕೋರಿ ಬರುವೆ ||

ಹೃತ್ಪ್ರಕೃತಿ ತಂದ ಕಿಡಿ ಹೂಗಳನ್ನು ತವಚರಣಕೆರೆಯುತ್ತಿರುವೆ |

ಶ್ರೀ ಚರಣ ಕೆರೆಯುತಿರುವೆ ||

|| ಶ್ರೀ ಗುರುವೇ ||

ಆ ಪಾದಪದ್ಮ ಎದೆಗವಚಿ

ಹಿಡಿದು ನಡುನೆತ್ತಿಗೆತ್ತಿಕೊಂಬೆ ||

ಉಸಿರಿಂದಲದನೆ ಬಲಗೊಂಬೆ

ನನ್ನ ಕಣ್ ಗೊಂಬೆಗೊತ್ತಿಕೊಂಬೆ |

|| ಶ್ರೀ ಗುರುವೇ ||

ಕಣ್ಣಿಂದ ನಿನ್ನ ನನ್ನನ್ನ ಸೇರಿ

ಎದೆಯೊಳಣ  ಬೆಳಕನೆತ್ತಿ ||

ತಿರುಮೂರ್ತಿ ಮಾಡು ನನ್ನನ್ನು

ನಿನ್ನ ಚಿನ್ನೋದ-ಬೋಧ ಬಿತ್ತಿ |

|| ಶ್ರೀ ಗುರುವೇ ||

ಭವಭವಕೆ ನನ್ನ ಮುಂದೆತ್ತಿ

ಒತ್ತಿ ತಂದಂಥ ತಂದೆ ನೀನು ||

ಭಾವಕ್ಕೆ ಇಳಿದು ಸದ್ಭಾವ ಬಲಿಸಿ

ಬರುವಂತೆ ಮಾಡು ನಾನು |

|| ಶ್ರೀ ಗುರುವೇ ||

ಆಂತರ್ಯದೊಂದು ಚೈತನ್ಯ

ನಿನ್ನ ಕೈಂಕರ್ಯ ಕರ್ತೃವಾಗಿ ||

ಕ್ಷೇತ್ರಜ್ಞ ಬರಲಿ, ಚೈತ್ಯೇಶನಾಗಿ

ಮಧುಬೋಧ ಮೋದ ಮಾಗಿ |

|| ಶ್ರೀ ಗುರುವೇ ||

***