ಯಾಕೆ ಮೂಕನಾದ್ಯೋ ಗುರುವೇ ನೀ |||

।। ಯಾಕೆ ಮೂಕನಾದ್ಯೋ।।

ಯಾಕೆ ಮೂಕನಾದಿ ಲೋಕಪಾಲಕ ಎನ್ನ 

ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ  

|| ಯಾಕೆ ಮೂಕನಾದ್ಯೋ  ||

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ 

ಮಂದಿಯೊಳಗೆನ್ನ ಮಂದನ್ನ ಮಾಡಿದೀಗ  |

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ

ಕಾಕುಜನರೊಳೆನ್ನ ನೂಕಿಬಿಟ್ಟು ನೀನು |

|| ಯಾಕೆ ಮೂಕನಾದ್ಯೊ || 

ಹೀಗೆ ಪಾಲಿಸಿದರೆ ಯೋಗಿಕುಲವರ್ಯ

ರಾಘವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ  || 

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ

ಘನ್ನಮಹಿಮನು ನೀ ಎನ್ನನು ಬಿಟ್ಟೀಗ  ||

 || ಯಾಕೆ ಮೂಕನಾದ್ಯೋ  ||

ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ ||

ಘನ್ನಮಹಿಮನು ನೀ ಎನ್ನನು ಬಿಟ್ಟೀಗ  |

ಜನನಿಯು ನೀ ಎನಗೆ, ಎನ್ನ ಜನಕನಯ್ಯ

ಮನ್ನಿಸೊ ನೀ ನಿತ್ಯಾನನ್ಯ ಶರಣನಯ್ಯ  ||

|| ಯಾಕೆ ಮೂಕನಾದ್ಯೋ  ||  

ಎಂದಿಗಾದರೂ ನಿನ್ನ ಹೊಂದಿಕೊಂಡವನಲ್ಲೊ 

ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರಾರೋ |

ನಾಥನು ನೀ ಅನಾಥನು ನಾನಯ್ಯ ||

ಪಾತಕರರಿ ಜಗನ್ನಾಥವಿಠಲ ದೂತ ||

|| ಯಾಕೆ ಮೂಕನಾದ್ಯೋ ||

***