ಕರುಣಿಸೋ ರಂಗ ಕರುಣಿಸೋ ||

ಹಗಲು ಇರಳು ನಿನ್ನ ಸ್ಮರಣೆ ಮರೆಯದಂತೆ ||

|| ಪ || 

ಕರುಣಿಸೋ ರಂಗ ಕರುಣಿಸೋ | 

ಕೃಷ್ಣ ಕರುಣಿಸೋ

ರಂಗ ಕರುಣಿಸೋ | 

||ಅ. ಪ||

ರುಕುಮಾಂಗದನಂತೆ ವ್ರತವ ನಾನರಿಯೆ | 

ಶುಕಮುನಿಯಂತೆ ಸ್ತುತಿಸಲು ಅರಿಯೆ | 

ಬಕವೈರಿಯಂತೆ ಧ್ಯಾನವ ಮಾಡಲರಿಯೇ | 

ದೇವಕಿಯಂತೆ ಮುದ್ದಿಸಲರಿಯೆನೋ ಕೃಷ್ಣ |

|| ಕರುಣಿಸೋ ರಂಗ ||

ಗರುಡನಂದದಿ ಪೊತ್ತು ತಿರುಗಲು ಅರಿಯೆ ||

ಕರೆಯಲು ಅರಿಯೆ ಕರಿರಾಜನಂತೆ | 

ವರಕಪಿಯಂತೆ ದಾಸ್ಯವ ಮಾಡಲರಿಯೇ |

ಸಿರಿಯಂತೆ ನೆರೆದು ಮೋಹಿಸಲರಿಯೆನೋ ಕೃಷ್ಣ ||

|| ಕರುಣಿಸೋ ರಂಗ ||

ಬಲಿಯಂತೆ ದಾನವ ಕೊಡಲು ಅರಿಯೆನೋ || 

ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ | 

ಒಲಿಸಲು ಅರಿಯೆ ಅರ್ಜುನನಂತೆ ಸಖನಾಗಿ ||

ಸಲಹೋ ದೇವರ ದೇವ ||| 

ಪುರಂದರವಿಠ್ಠಲ ಶ್ರೀ |||

ಪುರಂದರ ವಿಠ್ಠಲ |||

 || ಕರುಣಿಸೋ ರಂಗ ||


***