ಪಾವನ ನದಿಗಳು ಓಡುತ ಹರಿದು,

ಕಡಲ ಸೇರುವಂತೆ,

ಪಾಮರ ಮನುಜರು ಕಟೀಲಿಗೆ ಬಂದರೆ,

ಪಾಪ ಕರಗಿದಂತೆ.. ಪಾಪ ಕರಗಿದಂತೆ ||

|| ಪಾವನ ನದಿಗಳು ||

ಚಿತ್ತದ ನಿರ್ಮಲ ಹೂಗಳಲಿ,

ಭಕ್ತಿಯ ಜೇನಿನ ಸುಧೆ ಇರಲು ||

ಭಕ್ತಿಯ ಜೇನನು ಸವಿಯುತ ಪೊರೆವಳು |

ದುಂಬಿಯ ರೂಪದಿ ಭ್ರಮರಾಂಬೆ.. ||

|| ಪಾವನ ನದಿಗಳು ||

ಚಂಚಲ ಚಿತ್ತದ ಭ್ರಾಂತಿಯಲಿ,

 ಸಂಚಿತ ಪಾಪದ ಕೂಪದಲಿ ||

ತಪ್ಪನು ಮನ್ನಿಸು ಅಮ್ಮಾ ಎನ್ನಲು ,

ಅಪ್ಪುತ ಕಾಯ್ವಳು ಕಟೀಲಾಂಬೆ ,

ಒಪ್ಪುತ ಕರೆವಳು ಜಗದಂಬೆ |

|| ಪಾವನ ನದಿಗಳು ||

ದುರ್ಗಮ ಭವದ ಕಾನನದಿ, 

ದಾರಿಯ ಕಾಣದೆ ತೊಳಲಿರಲು ||

ದಾರಿಯ ತೋರು ದುರ್ಗಾ ಎನ್ನಲು,

ಹಾರುತ ಬರುವಳು ಭ್ರಮರಾಂಬೆ,

ಪಾರು ಮಾಡುವಳು ಕಟೀಲಾಂಬೆ |

|| ಪಾವನ ನದಿಗಳು |||

***