ಎಲ್ಲಾ ದುಃಖವ ನೀಗಿ ಬಿಡು 

ನನ್ನಯ್ಯ ಶಬರಿವಾಸ ||

ಎಲ್ಲಾ ದೋಷವ ಅಟ್ಟಿಬಿಡು ನನ್ನಯ್ಯ ಅನುಗ್ರಹಿಸು

ದೇವಾ ನನ್ನನು ಅನುಗ್ರಹಿಸು||

|| ಎಲ್ಲಾ ದುಃಖವ ನೀಗಿ ಬಿಡು ||

ಒಂದು ದಿನವೂ ಮರೆತಿಲ್ಲ

ನಿನ್ನನು ಸ್ಮರಿಸದ ಕ್ಷಣವಿಲ್ಲ ||

ಮಾಯಾಮಯವೀ ಜೀವನದಲ್ಲಿ

ಮದಮಾತ್ಸರ್ಯಗಳ ಓಡಿಸೆಯಾ ||

ಪ್ರೇಮವ ಹುಡುಕೀ ಅಲೆದೂ ಅಲೆದೂ

ಕ್ಷಣದ ಸುಖವನು ತ್ಯಜಿಸಿರುವೆ ||

|| ಎಲ್ಲಾ ದುಃಖವ ನೀಗಿ ಬಿಡು ||

ಕರಚರಣಗಳೂ ಸುಸ್ತಾಗಿ

ಮನಸು ಎಲ್ಲೋ ಅಲೆಯುತಿದೆ ||

ಅಖಿಲಾಂಡೇಶ್ವರ ಅಭಯವ ನೀಡದೆ 

ಇನ್ನು ನನಗೆ ಬದುಕಿಲ್ಲ ||

ಸ್ವಾಮಿ ಶರಣು ಅಯ್ಯಪ್ಪ

ಶರಣು ಶರಣು ಅಯ್ಯಪ್ಪ || 

 || ಎಲ್ಲಾ ದುಃಖವ ನೀಗಿ ಬಿಡು ||


***