ಶಂಕರ ಶಶಿಧರ ಗಜ ಚರ್ಮಾಂಬರ ಗಂಗಾಧರ ಹರನೇ
ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ ||
ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ
ಶೂಲಿ ಕಪರ್ದಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ ||
ಜಯ ಮೃತ್ಯುಂಜಯನೇ ||
ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ ||
ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||
ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ ||
ಕರುಣಾಸಾಗರನೇ ||
ಶಂಕರ ಶಶಿಧರ ಗಜ ಚರ್ಮಾಂಬರ ಗಂಗಾಧರ ಹರನೇ
ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ ||
ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||