ಎಲ್ಲೆಲ್ಲೂ ನಿನ್ನನೆ ಕಾಣುವೆ
ಎಲ್ಲರಮ್ಮ ಎಲ್ಲಮ್ಮಾ ||
ಬಲ್ಲಿದರಿಗೆ ಭಾಗ್ಯದೇವಿ
ಪುಲ್ಲನಯನೆ ಕಾಯಮ್ಮ ||
|| ಎಲ್ಲೆಲ್ಲೂ ನಿನ್ನನೆ ||
ಚರಣಾಶ್ರಿತ ಜನರಕ್ಷಕಿಯೆ
ನಿರುಪಮ ಮಹಿಮಾನ್ವಿತಳೇ ||
ಮೊರೆಯಿಡುವೇ ಕರಮುಗಿವೆ
ಪರಿಪಾಲಿಸು ನೀ ಬಾ ಬಾ ||
ಸುರಜನರಿಂ ವಂದಿತಳೇ
ವರವ ನೀಡಿ ಪೊರೆಯೇ ತಾಯೇ ||
ಮೊರೆಯಿಡುವೇ ಕರಮುಗಿವೆ
ಪರಿಪಾಲಿಸು ನೀ ಬಾ ಬಾ ||
|| ಎಲ್ಲೆಲ್ಲೂ ನಿನ್ನನೆ ||
ತನುವತ್ತಲೆ ನೀನೊಲ್ಲೇ
ಮನಬೆತ್ತಲೆಗೊಲಿಯುವೆ ನೀನು ||
ಅನುದಿನವೂ ನಿನಗಾಗಿ ತನುಮನಧನ ಎಂಬುವೆ ನಾನು ||
ಕನಸು ಮನಸಿನಲ್ಲಿ ಎಂದೂ
ನೆನೆಯುತಿರುವೆ ನಿನ್ನ ಮಹಿಮೆ ||
ಅನುದಿನವೂ ನಿನಗಾಗಿ ತನುಮನಧನ ಎಂಬುವೆ ನಾನು ||
|| ಎಲ್ಲೆಲ್ಲೂ ನಿನ್ನನೆ ||
ಮಾಧವಹರಿ ವೇದವ್ಯಾಸನ ದಾಸನ ನೀ ಕಾಯುವುದಮ್ಮ ||
ಸಾಧುಸಂತರನು ನೀ ಮೋದದಲಿ ಪೊರೆಯಮ್ಮ ||
ಆದರದಲಿ ಜ್ಞಾನ ಭಕುತಿ ನೀ ದಯದಲಿ ನೀಡಮ್ಮ ||
ಸಾಧುಗಳ ಸಂತರನು ಮೋದದಲಿ ಪೊರೆಯಮ್ಮ
|| ಎಲ್ಲೆಲ್ಲೂ ನಿನ್ನನೆ ||
***