ಶರಣು ಸಿದ್ಧಿವಿನಾಯಕ 

ಶರಣು ವಿದ್ಯ ಪ್ರದಾಯಕ   ||

ಶರಣು ಪಾರ್ವತಿ ತನಯ ಮೂರುತಿ

ಶರಣು ಮೂಷಿಕ ವಾಹನ ||

|| ಪ ||

ನಿಟಿಲ ನೇತ್ರನ ದೇವಿ ಸುತನ 

ನಾಗಭೂಷಣ ಪ್ರಿಯನೇ ||

ತಟಿಲ ತಂಕಿತ ಕೋಮಲಾಂಗನೇ 

ಕರ್ಣಕುಂಡಲಧಾರಣೆ ||

|| ಶರಣು ಸಿದ್ಧಿವಿನಾಯಕ ||

ಬಟ್ಟ ಮುತ್ತಿನ ಪದಕ ಹಾರನೆ

ಬಾಹು ಹಸ್ತ ಚತುಷ್ಟನೇ ||

ಇಟ್ಟ ತೊಡುಗೆಯ ಹೇಮ ಕಂಕಣ

ಪಾಶ ಅಂಕುಶ ಧಾರಣೇ ||

||  ಶರಣು ಸಿದ್ಧಿವಿನಾಯಕ ||

ಕುಕ್ಷಿಮಹಲಂಬೋದರನೇ 

ಇಕ್ಷುಚಾಪನ ಗೆಲಿದನೆ ||

ಪಕ್ಷಿವಾಹನ ಶ್ರೀ ಪುರಂದರ 

ವಿಠಲನ ನಿಜದಾಸನೇ ||

||  ಶರಣು ಸಿದ್ಧಿವಿನಾಯಕ ||



***