ದಾಸೋಹಂ ದಾಸೋಹಂ ತವ
ದಾಸೋಹಂ ದಾಸೋಹಂ ||
||ಪ||
ವಾಸುದೇವ ವಿಗತಾಘಸಂಘ ||
ತವ
||ದಾಸೋಹಂ||
ಜೀವಾಂತರ್ಗತ ಜೀವನಿಯಾಮಕ
ಜೀವವಿಲಕ್ಷಣ ಜೀವನದಾ ||
ಜೀವಾಧಾರಕ ಜೀವರೂಪ ರಾಜೀವ ಭವಜನಕ ಜೀವೇಶ್ವರ ತವ |
|| ದಾಸೋಹಂ ||
ಕಾಲಾಂತರ್ಗತ ಕಾಲನಿಯಾಮಕ
ಕಾಲಾತೀತ ತ್ರಿಕಾಲಜ್ಞ ||
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲರೂಪ ತವ |
|| ದಾಸೋಹಂ ||
ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮಫಲಪ್ರದ ಕರ್ಮಜಿತ ||
ಕರ್ಮಬಂಧ ಮಹ ಕರ್ಮವಿಮೋಚಕ
ಕರ್ಮನಿಗ್ರಹ ಕರ್ಮಸಾಕ್ಷಿ ತವ |
|| ದಾಸೋಹಂ ||
ಧರ್ಮಯೂಪ ಮಹ ಧರ್ಮವಿವರ್ಧನ
ಧರ್ಮವಿದುತ್ತಮ ಧರ್ಮನಿಧೇ ||
ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಮಿತ್ರ ತವ |
|| ದಾಸೋಹಂ ||
ಮಂತ್ರಯಂತ್ರಮಯ ಮಂತ್ರಬೀಜ ಮಯ
ಮಂತ್ರರಾಜಗುರು ಮಂತ್ರಧೃತ ||
ಮಂತ್ರಮೇಯ ಮಹ ಮಂತ್ರಗಣ್ಯ
ವರಮಂತ್ರದೇವ ಜಗನ್ನಾಥ ವಿಠಲ ತವ |
|| ದಾಸೋಹಂ ||
***