ನೀಡು ಶಿವಾ ನೀಡದಿರು ಶಿವಾ 

ಬಾಗುವುದು ನನ್ನ ಕಾಯ ||

ನಾನೇಕೆ ಅಂಜಲಿ ನೀ ನನ್ನ ಅಂಬಲಿ

ನೀಡು ಶಿವ ನೀಡದಿರು.... ಶಿವ

ಬಾಗುವುದು ನನ್ನ ಕಾಯ

|| ಪ ||

ಶೃಂಗಾರ ಕೃತಕ ಬಂಗಾರ ಕ್ಷಣಿಕ

ಬಾಳಲ್ಲಿ ಬಡಿವಾರವೇಕೆ ||

ನೀನಿತ್ತ ಕಾಯ ||

ನಿನ್ನ ಕೈಲೇ ಮಾಯ |

ಆಗೋದು ಹೋಗೋದು ನಾ ಕಾಣೆನೆ |

|| ನೀಡು ಶಿವ ||

ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು

ನಾನಂತು ನಿನ್ನನ್ನಲಾರೆ ||

ಸಾರಂಗ ಮನಕೆ...||

ನೂರಾರು ಬಯಕೆ

ಮುಂದಿಟ್ಟು ರಮಿಸೋದು ನಾ ಕಾಣೆನೆ

|| ನೀಡು ಶಿವ ||

***