ನಂಬಿದೆ ನಿನ್ನ ನಾಗಾಭರಣ
ಕಾಯೋ ಕರುಣಾಮಯ ನನ್ನ ||
|| ಪ||
ನಿನ್ನೀ ನಾಮವು ಒಂದೇ
ನೀಗಿಸಬಲ್ಲದು ಬಾಧೆ ||
ತನುಮನ ಜೀವನ ಪಾವನವಯ್ಯ
ಶಂಭೋ ಎನ್ನಲು ಇಲ್ಲ ಭಯ
||ನಂಬಿದೆ ನಿನ್ನ ||
ಬಾಡದ ಹೂವಿನ ಮಾಲೆ
ಬಾಗಿತು ಪಾದದ ಮೇಲೆ
ಪ್ರೇಮಮಯ ನಿನಗೆ ಜಯ
ನನ್ನೀ ಜೀವನ ನಿನ್ನಲಿ ತನ್ಮಯ
ಬಾಳಿನ ಹಾದಿಯ ಬೆಳಗಯ್ಯ
||ನಂಬಿದೆ ನಿನ್ನ ||
ಲೋಕವ ಕಾಯುವ ಸ್ವಾಮಿ
ಭಿಕ್ಷೆಯ ಬೇಡಿದ ಪ್ರೇಮಿ ||
ಭಸ್ಮಮಯ ಬಿಲ್ವಪ್ರಿಯ
ನನ್ನೀ ದೇಹವೇ ನಿನ್ನಯ ಆಲಯ
ಸೇವಾ ಭಾಗ್ಯವ ನೀಡಯ್ಯ||
||ನಂಬಿದೆ ನಿನ್ನ ||