ದಾರಿ ಯಾವುದಯ್ಯ

ವೈಕುಂಠಕೆ ದಾರಿ ತೋರಿಸಯ್ಯಾ || 

|| ಪ ||

ದಾರಿ ಯಾವುದಯ್ಯಾ ದಾರಿ ತೋರಿಸಯ್ಯಾ ||

ಆಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ

 || ದಾರಿ ಯಾವುದಯ್ಯಾ ||

ಬಲುಭವದನುಭವದಿ ಕತ್ತಲೆಯೊಳು ಬಲು ಅಂಜುತೆ ನಡುಗಿ ||

ಬಳಲುತ್ತ ತಿರುಗಿದೆ ಹಾದಿಯ ಕಾಣದೆ ||

ಹೊಳೆವಂತ ದಾರಿಯ ತೋರೋ ನಾರಾಯಣ |

|| ದಾರಿ ಯಾವುದಯ್ಯಾ ||

ಪಾಪ ಪೂರ್ವದಲಿ ಮಾಡಿದುದಕೆ

ಲೇಪವಾಗಿದೆ ಕರ್ಮ ||

ಈ ಪರಿಯಿಂದಲಿ ನಿನ್ನ ನೆನೆಸಿಕೊಂಬೆ ||

ಶ್ರೀಪತಿ ಸಲಹೆನ್ನ ಭೂಪ ನಾರಾಯಣ |

|| ದಾರಿ ಯಾವುದಯ್ಯಾ ||

ಇನ್ನು ನಾ ಜನಿಸಲಾರೆ ಭೂಮಿಯ ಮೇಲೆ 

ನಿನ್ನ ದಾಸನಾದೆನೋ ||

ಪನ್ನಗಶಯನ ಶ್ರೀ ಪುರಂದರ ವಿಠಲ ||

ಇನ್ನು ಪುಟ್ಟಿಸದಿರೊ ಎನ್ನ ನಾರಾಯಣ |

|| ದಾರಿ ಯಾವುದಯ್ಯಾ ||

***

|