ನೋಡು ನೋಡು ಕಣ್ಣಾರ ನಿಂತಿಹಳು 

ನಗುನಗುತಾ ಚಾಮುಂಡಿ ನಿಂತಿಹಳು ||

 ||ಪ||

ತಾಯಿ ಹೃದಯ ತಂದಾ ತುಂಬುಮಮತೆಯಿಂದ 

ಬಾ ಇಲ್ಲಿ ಓ ಕಂದ ಎನುತಿಹಳು 

ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು |

||ನೋಡು ನೋಡು||

ಮೈಸೂರು ನಗರದ ಬೆಟ್ಟದ ಮೇಲೆ 

ಮಹಿಷಾಸುರ ಸೂದನಿಯ ವೈಭವ ಲೀಲೆ ||

ಧನುಜ ಸಂಹಾರಿಣಿ  ತ್ರಿಭುವನ ಪೋಷಿಣಿ 

ಶಂಕರನ ರಾಣಿಗೀವ ಹೂಗಳ ಮಾಲೆ   |

 ||ನೋಡು ನೋಡು||

ನಂಬಿರುವ ಭಕ್ತರ ರಕ್ಷೆಗಾಗಿ

ನಂಬದಿಹ ದುಷ್ಟರ ಶಿಕ್ಷೆಗಾಗಿ  ||

ನಿಂತಿಹಳು ನೋಡಲ್ಲಿ ಶೂಲಪಾಣಿಯಾಗಿ 

ಕರುನಾಡ ಮಕ್ಕಳ ಹಿರಿದೈವವಾಗಿ  |

 || ನೋಡು ನೋಡು||

ಉಕ್ಕಿಬಹ ನದಿಯಲ್ಲಿ ಅವಳ ನಗೆ  

ಬೀಸಿಬಹ ಗಾಳಿಯಲ್ಲಿ ಅವಳುಸಿರು ||

ಹಸಿಹಸಿರುಪೈರುಗಳೇ ಅವಳುಡುಗೆ 

ಆ ತಾಯಿ ರೂಪವೋ ಹಲವು ಬಗೆ |

||ನೋಡು ನೋಡು||



***