ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮ
ಅಮ್ಮ ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮ ||
|| ಪ ||
ಲಕ್ಷ್ಮೀ ಮಹಾಲಕ್ಷ್ಮಿ ||
ಲಕ್ಷ್ಮೀ ಜಯಲಕ್ಷ್ಮಿ ಲಕ್ಷ್ಮೀ ಶುಭಲಕ್ಷ್ಮಿ |
ನೀ ಧನವಾಗಿ ಧಾನ್ಯವಾಗಿ |
|| ಬಾರಮ್ಮಾ ಬಡವರ ಮನೆಗೆ ||
ಶ್ರೀಹರಿ ಮನೋವಿಲಾಸಿನಿ
ಶ್ರೀನಿಧಿ ಮಹಾಪ್ರಚೋದಿನಿ |
ಶ್ರೀಸುಖಿ ಸುಮಂಗಳಾಂಗಿನಿ
ಸರ್ವ ಇಷ್ಟ ಸುಪ್ರದಾಯಿನಿ |
ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮ
ಶಾರದೆ ಜೊತೆಯಲ್ಲಿ ಹಾಡಿ ನಲಿಯಮ್ಮ |
|| ಲಕ್ಷ್ಮೀ ಮಹಾಲಕ್ಷ್ಮೀ ||
ನಿನ್ನ ಗಂಡ ಲೋಕನಾಯಕ
ನೀನು ಅವನ ಹೃದಯತಾರಕ |
ನಿನ್ನ ಮಗನು ಲೋಕಕಾರಕ
ನೀನು ಅವನ ಸೃಷ್ಟಿಪ್ರೇರಕ |
ನಿನ್ನ ದಯದಲ್ಲಿ ಎಲ್ಲ ಬಂಗಾರ
ಮಣ್ಣಿನ ಮಡಿಲೆಲ್ಲ ಚಿನ್ನ ರತ್ನದ ಭಂಡಾರ |
|| ಲಕ್ಷ್ಮೀ ಮಹಾ ಲಕ್ಷ್ಮೀ ||
|
***