ನಲಿದಾಡೆ ಎನ್ನ ನಾಲಿಗೆ ಮ್ಯಾಲೆ,
ಶಾರದಾದೇವಿ |
ಕುಣಿದಾಡೆ ಎನ್ನ ನಾಲಿಗೆ ಮ್ಯಾಲೆ |
ನಾಲಿಗೆ ಮ್ಯಾಲೆ |
|| ನಲಿದಾಡೆ ||
ಘಿಲು ಘೀಲು ಘಿಲು ಘಿಲು ಗೆಜ್ಜೆಯ ನಾದ ,
ಹೊಳೆವ ಅಂದುಗೆ , ರುಳಿ ಪೈಂಜಣವಿಟ್ಟ ಪುಟ್ಟ ಪಾದ ,
ಸುರವರನುತ ಪಾದ ||
ಸರಸಿಜೋದ್ಭವನ ವದನ ನಿಲಯಳೆ ||
ಕರುಣದಿಂದ ಪರಿಪಾಲಿಸು ಮಾತೆ
|| ನಲಿದಾಡೆ ||
ನಸುನಗೆ ಮುಖವು ನಾಸಾಭರಣ,
ಎಸೆವ ಕಪೋಲ ,
ಹೊಸಮುತ್ತಿನ ಚಳು ತುಂಬಿಟ್ಟ ಶ್ರವಣ ,
ತಿಲಕವು ಹಸನ ||
ಶಶಿಸೂರ್ಯರ ಆಭರಣ ಶೋಭಿತಳೆ ||
ಕುಸುಮ ಮುಡಿದ ಮೂರ್ಧ್ವಜವುಳ್ಳವಳೆ
|| ನಲಿದಾಡೆ ||
ಶೃಂಗಾರವಾದ ಜಡೆ ಬಂಗಾರ ,
ರಾಗುಟಿ ಚೌರಿ ,
ಹೊಂಗ್ಯಾದಿಗೆ ಗೊಂಡೆ ಮುತ್ತಿನ ಹಾರ ,
ರಂಗು ಮನೋಹರ ||
ಮಂದಗಮನೆ ಅರವಿಂದ ನಯನ ಸಿರಿ ||
ರಂಗವಿಠ್ಹಲನ ತೋರೇ ಶುಭಾಂಗಿ
|| ನಲಿದಾಡೆ ||
|
***