ಒಂದು ಬಾರಿ ಬಂದು ನೋಡಿ  ಮರೆಯದು ಜೀವಾ 

ಮಂತ್ರಾಲಯ‌ ದರುಷನವೇ ದಿವ್ಯ ಅನುಭವ ||ಪ||

ಭೂಮಿಯೊಳಗೆ ನಾಕವೇ 

ಮಂತ್ರಾಲಯ ತಾಣವೇ 

ಇಹಕು‌ ಪರಕು‌ ಸೇತುವೇ  

 ಶ್ರೀ ರಾಘವೇಂದ್ರ ನಾಮವೆ ||                              

||ಒಂದು ಬಾರಿ||

ಪಾಪ ಕಳೆವ ಸುರಗಂಗೆ

ಇಲ್ಲಿ ಹರಿವ ತುಂಗೆ 

ಪ್ರೇಮಭರಿತ ಹೂಬನ 

ರಾಯರ ಬೃಂದಾವನ ||                              

||ಒಂದು ಬಾರಿ||

ಏಳು ನೂರು ವರುಷಗಳು 

ಗುರುಗಳು ಇಲ್ಲಿಹರು  

ಭಕ್ತ ಕೋಟಿ ಬೇಡಿಕೆಯ 

ಪ್ರೀತಿಯಿಂದ ತರುವರು   ||                           

 ||ಒಂದು ಬಾರಿ||

***