ಶಿವ ಶಿವ ಎಂದರೆ ಭಯವಿಲ್ಲ

ನಾಮಕೆ ಸಾಟಿ ಬೇರಿಲ್ಲ

ಶಿವ ನಾಮಕೆ ಸಾಟಿ ಬೇರಿಲ್ಲ

 ||ಪ||

ಶಿವ ಭಕ್ತನಿಗೆ ನರಕಾ ಇಲ್ಲ 

ಜನುಮ ಜನುಮಗಳ ಕಾಟವದಿಲ್ಲ  ||

|| ಶಿವ ಶಿವ ||

ಅನ್ನದಾನವ ತೊರೆಯದಿರು

ನಾನು ನನ್ನದು ಎನ್ನದಿರು||

ಉನ್ನತಿ ಸಾಧಿಸೆ ಹಗಲಿರುಳು||

ದೀನಾನಾಥನ ಮರೆಯದಿರು |

|| ಶಿವ ಶಿವ ||

ಭೋಗ ಭಾಗ್ಯದ ಬಲೆಯೊಳಗೆ

ಬಳಲಿ ಬಾಡದೆ ಇಳೆಯೊಳಗೆ ||

ಕಾಯಕ ಮಾಡುತ ಎಂದೆಂದೂ||

ಆತ್ಮಾನಂದವ ಪಡೆಯುತಿರು|

|| ಶಿವ ಶಿವ ||

ದಾನವೆ ಜಗದೊಳು ತಪವಯ್ಯ

ಧ್ಯಾನವೆ ಘನತರ ಜಪವಯ್ಯ||

ಅಪಕಾರವ ನೀ ಮಾಡಿದರೆ ||

ಕೈಲಾಸವದು ಸಿಗದಯ್ಯ | 

 || ಶಿವ ಶಿವ ||

                            ***