ಎನ್ನ ಕಂದಾ ಹಳ್ಳಿಯ ಹನುಮ

 ಚೆನ್ನಾಗಿ ಇಹರೇ ಲಕ್ಷ್ಮಣದೇವರು ||

|| ಪ ||

ತುಪ್ಪ ಪಂಚಾಂಮೃತವಂದು

ಅಡವಿ ಗಡ್ಡೆಗಳಿಂದು ||

ಕರ್ಪೂರ ವೀಳ್ಯವಂದು

ಕರುಕು ಇಂದು ||

ಸುಪ್ಪತ್ತಿಗೆ ಮಂಚವಂದು 

ಹುಲ್ಲಹಾಸಿಗೆ ಇಂದು ||

ಶ್ರೀಪತಿ ರಾಘವ ಕ್ಷೇಮದಲ್ಲೈದಾರೆ||

|| ಎನ್ನ ಕಂದಾ ||

ನವವಸ್ತ್ರಗಳು ಅಂದು 

ನಾರಸೀರೆಗಳಿಂದು ||

ಹೂವಿನಗಂಟು ಅಂದು

ಜಡೆಗಳಿಂದು||

ಜವಾಜಿ ಕಸ್ತೂರಿ ಅಂದು

ಭಸಿತಧೂಳಿ ಇಂದು||

ಶ್ರೀವರ ರಾಘವ ಕ್ಷೇಮದಲ್ಲೈದಾರೆ ||

|| ಎನ್ನ ಕಂದಾ ||

ಕನಕ ರಥಗಳಂದು 

ಕಾಲುನಡಿಗೆ ಇಂದು ||

ಘನಸತ್ತಿಗೆಯು ಅಂದು

ಬಿಸಿಲು ಇಂದು ||

ಸನಕಾದಿಗಳೋಲೈಪ ಆದಿಕೇಶವ ನಮ್ಮ

ಹನುಮೇಶ ರಾಘವ ಕ್ಷೇಮದಲ್ಲೈದಾರೆ ||

|| ಎನ್ನ ಕಂದಾ ||