ನನ್ನಪ್ಪನಲ್ಲವಾ ಅಯ್ಯಪ್ಪನಲ್ಲವಾ ||ಶಬರಿಮಲೆ ವಾಸನೇ ಶರಣಂ |ಪಂಚಮಲೆವಾಸ ಪಂದಳದ ಕಂದನೇ ಶರಣಂ |ಹದಿನೆಂಟು ಮೆಟ್ಟಿಲೇರಿದ ಧರ್ಮಶಾಸ್ತನೇ ಶರಣಂ |ಅನಾಥರಕ್ಷಕನೇ ಶರಣಂ | ಶರಣಂ‌ ಶರಣಂ |ಓಂ ||ಶರಣಂ‌ ಶರಣಂ ಅಯ್ಯಪ್ಪಸ್ವಾಮಿ ಶರಣಂ‌ ಅಯ್ಯಪ್ಪ ||||

ನನ್ನಪ್ಪನಲ್ಲವಾ 

ಅಯ್ಯಪ್ಪನಲ್ಲವಾ ||

ನೀನೆಂದೂ ನನ್ನವಾ 

ಮೂಲೋಕ ಬಾಂಧವಾ |

ನನ್ನಪ್ಪನಲ್ಲವಾ 

ಅಯ್ಯಪ್ಪನಲ್ಲವಾ ||

ಶ್ರೀರೂಪನಲ್ಲವಾ ಶ್ರೀಕಾರನಲ್ಲವಾ ||

ಶರಣಂ‌ ಶರಣಂ ಅಯ್ಯಪ್ಪ

ಸ್ವಾಮಿ ಶರಣಂ‌ ಅಯ್ಯಪ್ಪ ||

|| ಪ ||

ಆಪತ್ತು ಬಂದರೇ ಅಯ್ಯಪ್ಪ ಅಂದರೇ 

ಎನ್ನಪ್ಪ ಎನ್ನುತಾ‌ ನೀ ಬಂದು‌ ನಿಲ್ಲುವೆ ||

ನಂಬೋರ ಪಾಲಿಗೆ ನೊಂದೋರ ಬಾಳಿಗೇ |

ಆಧಾರವಾಗುತಾ ನೀ ಬಂದು ಕಾಯುವೆ |

ತುಪ್ಪವನು ತಂದೇ ಅಪ್ಪಾ ನಿನಮಲೆಗೆ ||

ಅಭಿಷೇಕವ ಪಡೆದು ಅನುಗ್ರಹಿಸೋ ಸ್ವಾಮಿ ||

ಸ್ವಾಮಿ ಅಯ್ಯಪ್ಪ ಶರಣಂ ಅಯ್ಯಪ್ಪ

ಬರುವೆವು ಅಯ್ಯಪ್ಪ ದರುಶನ ನೀಡಪ್ಪ ||

ನಿನ್ನ ಕರುಣೆಗೆ ಕಾದೆವು ಅಯ್ಯಪ್ಪ |

ಬರುವೆವು ಅಯ್ಯಪ್ಪ ಕಾಯೋ ನನ್ನಪ್ಪ |

ಶರಣಂ‌ ಶರಣಂ ಅಯ್ಯಪ್ಪ

ಸ್ವಾಮಿ ಶರಣಂ‌ ಅಯ್ಯಪ್ಪ ||

ನನ್ನಪ್ಪನಲ್ಲವಾ ಅಯ್ಯಪ್ಪನಲ್ಲವಾ |

ಮುಕ್ತಿ ಪ್ರಧಾಯಕ ಮೋಹ ವಿನಾಶಕ |

ನನ್ನಪ್ಪನಲ್ಲವಾ ಅಯ್ಯಪ್ಪನಲ್ಲವಾ |

ಭೂಲೋಕವಾಸನೆ ಭೂ‌ಮಿ ಪ್ರಪಂಚನೇ‌ |

ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ||


ಶರಣಂ‌ ಶರಣಂ ಅಯ್ಯಪ್ಪ

ಸ್ವಾಮಿ ಶರಣಂ‌ ಅಯ್ಯಪ್ಪ ||

|| ನನ್ನಪ್ಪನಲ್ಲವಾ ||