ಎಲ್ಲಿರುವೆ ಮುದ್ದು ಕೃಷ್ಣ ಬಾಬಾ ಬಾ ||

ನಿನ್ನನೊಮ್ಮೆ ನೋಡಬೇಕು ಬಾಬಾ ಬಾ ||

|| ಎಲ್ಲಿರುವೆ ಮುದ್ದು ||

ಕೊಳಲ ಗಾನ ಮಾಡಿಕೊಂಡು ಬಾಬಾ ಬಾ ||

ಗೆಳೆಯರನ್ನು ಕೂಡಿಕೊಂಡು ಬಾಬಾ ಬಾ ||

|| ಎಲ್ಲಿರುವೆ ಮುದ್ದು ||

ಕದಿಯ ಹೋಗಬೇಡ ನೀನು ಬಾಬಾ ಬಾ ||

ನಿನಗೆ ತಿನ್ನಲೇನು ಬೇಕು ಬಾಬಾ ಬಾ ||

|| ಎಲ್ಲಿರುವೆ ಮುದ್ದು ||

ಕೈ ಮುಗಿದು ಕರೆಯುತಿರುವೆ ಬಾಬಾ ಬಾ ||

ಹಾಲು ಮೊಸರು ಬೆಣ್ಣೆ ಕೊಡುವೆ ಬಾಬಾ ಬಾ ||

ಎನ್ನ ಆತ್ಮದಲ್ಲಿ ನೆಲೆಸು ಬಾಬಾ ಬಾ ||

|| ಎಲ್ಲಿರುವೆ ಮುದ್ದು ||

***