ರಾಮನ ಬಂಟ ಹನುಮಂತ
ಸ್ವಾಮಿ ಭಕ್ತಿಯ ಘನವಂತ
ಕಾನನದಲ್ಲಿ ರಾಮನ ಕಂಡು
ಕೈ ಮುಗಿದು ನಿಂತಾ ಹನುಮ
ಕೈ ಮುಗಿದು ನಿಂತಾ ||
|| ಪ ||
ಅಂಜನಾತ್ಮಜ ಅಮರ ಸಂಜೀವನರಾಯ
ಕಂಜನಾಭನ ದೂತ ಪಿಂಗಳವರಕಾಯ ||
ನಂಜ ಕಳೆಯುತ್ತ ಜೀವತಂದಾ ವರದಾ ||
ಆಂಜನೇಯ ಹನುಮಂತ ವೀರಾಧಿವೀರ
ವರವೀರಾಧಿವೀರ |
|| ರಾಮನ ಭಂಟ ||
ಸಜ್ಜನ ಪ್ರಿಯವೀರ ಅರ್ಜುನ ಸೋದರ
ವಜ್ರಶರೀರ ವಾನರ ಮಾರುತಿ ಗಂಭೀರ ||
ಲಂಕೆ ಹಾರಿದ ಪಂಕಜಾಕ್ಷಿ ನೋಡಿದ ||
ಆಂಜನೇಯ ಹನುಮಂತ ಧೀರಾಧಿಧೀರ
ಶೂರ ಧೀರಾಧಿಧೀರ |