ದಾಸನೆನಿಸೋ ನಿನ್ನ
ದಾಸನೆನಿಸೋ ನಿನ್ನ
ಶ್ರೀನಿವಾಸ ಕ್ಷಮಿಸೋ ಎನ್ನ ||
|| ಪ ||
|| ಪ ||
ಆಶಪಾಶಗಳಲ್ಲಿ ಘಾಸಿಬಿದ್ದೆನೋ ರಂಗ ||
ದೋಷರಹಿತ ಪರಮೇಶ ರಕ್ಷಿಸೋ ಎನ್ನ ||
|| ದಾಸನೆನಿಸೋ ನಿನ್ನ ||
|| ದಾಸನೆನಿಸೋ ನಿನ್ನ ||
ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿ ||
ಧುರುಳ ಸಂಖ್ಯವ ಹಿಡಿದು ಕರುಳ ಬಗೆದ ಹರೀ ||
|| ದಾಸನೆನಿಸೋ ನಿನ್ನ ||
|| ದಾಸನೆನಿಸೋ ನಿನ್ನ ||
ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ ||
ಮಲ್ಲಿನಾಥಪುರದ ಚೆಲುವ ಶ್ರೀಕೃಷ್ಣನೇ ||
|| ದಾಸನೆನಿಸೋ ನಿನ್ನ ||
|| ದಾಸನೆನಿಸೋ ನಿನ್ನ ||
***