ತೂಗೀರೆ ರಾಯರ ತೂಗೀರೇ ಗುರುಗಳ
ತೂಗೀರೆ ಯತಿಕುಲ ತಿಲಕರ ||
ತೂಗೀರೆ ಯೋಗೀಂದ್ರ ಕರಕಮಲ ಪೂಜ್ಯರ |
ತೂಗೀರೆ ಗುರುರಾಘವೇಂದ್ರರ ||
|| ಪ ||
ಕುಂದನಮಯವಾದ ಚಂದದ ತೊಟ್ಟಿಲೊಲ್
ಅಂದಾದಿ ಮಲಗ್ಯಾರೆ ತೂಗೀರೆ ||
ನಂದನಕಂದ ಮುಕುಂದ ಗೋವಿಂದನ
ಚೆಂದಾದಿ ಭಜಿಪರ ತೂಗೀರೆ ||
ಜೋ ಜೋ ಜೋ ಜೋ ||
|| ತೂಗೀರೆ ರಾಯರ ||
ಯೋಗನಿದ್ರೆಯನ್ನು ಬೇಗನೆ ಮಾಡುವ
ಯೋಗೀಶವಂದ್ಯರ ತೂಗೀರೆ ||
ಭೋಗಿಶಯಣನ ಪಾದ ಯೋಗದಿ ಭಜಿಸುವ
ಭಾಗವತರನ್ನ ತೂಗೀರೆ ||
ಜೋ ಜೋ ಜೋ ಜೋ
|| ತೂಗೀರೆ ರಾಯರ ||
ಭಜಕಜನರು ತಮ್ಮ ಭಜನೆಯ ಮಾಡಲು
ನಿಜಗತಿಯಿಪ್ಪರ ತೂಗೀರೆ ||
ನಿಜಗುರು ಜಗನ್ನಾಥ ವಿಠಲನ ಪಾದ
ಭಜನೆಯ ಮಾಲ್ಪಾರ ತೂಗೀರೆ ||
ಜೋ ಜೋ ಜೋ ಜೋ ||