ವೆಂಕಟೇಶ ಕಲ್ಯಾಣ ವಿಶ್ವದ ಕಲ್ಯಾಣ ||
ಪದ್ಮಾವತಿಯ ಕಲ್ಯಾಣ ಭಾಗ್ಯದ ಕಲ್ಯಾಣ ||
ನಿತ್ಯೋತ್ಸವಗಳ ಕಲ್ಯಾಣ ನಿತ್ಯ ಕಲ್ಯಾಣ
ಪದ್ಮಾವತಿಯ ಕಲ್ಯಾಣ ಭಾಗ್ಯದ ಕಲ್ಯಾಣ |
|| ವೆಂಕಟೇಶ ||
ಬ್ರಹ್ಮ ರುದ್ರರು ಇಂದ್ರ ಚಂದ್ರರು
ಮುಕ್ಕೋಟಿ ಸುರರು ಬಂದಿಹರು |
ಮನ್ಮಥ ಜನಕನ ಮದುವೆಯ ಮಾಡಲು
ಲಕುಮಿ ಬಂದಳು, ಬಕುಲೆಯು ಬಂದಿಹಳು
|| ವೆಂಕಟೇಶ ||
ಬನ್ನಿರಿ ವೈಶಾಖ ದಶಮಿಯ ಕಲ್ಯಾಣ
ನೋಡಿರಿ ವೈಭವಪೂರಿತ ಕಲ್ಯಾಣ |
ಶ್ರೀನಿಧಿಕಮಲ ನಾಥನ ಕಲ್ಯಾಣ ||
ಲೋಕದ ಕಣ್ಮನ ಸೆಳೆಯುವ ಕಲ್ಯಾಣ
|| ವೆಂಕಟೇಶ ||
ಕಲ್ಯಾಣೋತ್ಸವ ಸೇವೆಯ ಮಾಡೋಣ
ಶ್ರೀನಿವಾಸನ ಕಲ್ಯಾಣ ನೋಡೋಣ ||
ಕಾಣಿಕೆ ಸಲ್ಲಿಸಿ ನಮಿಸೋಣ ||
ಕೈವಲ್ಯ ಸುಖವನು ಪಡೆಯೋಣ ||
|| ವೆಂಕಟೇಶ ||
***