ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ ತಂಗಿ
ಇವನಂತ ಚೆಲ್ವರಿಲ್ಲ ನೋಡು ಬಾರೆ ||
|| ಪ ||
ಒಂದೇ ಕೈಲಾಜನ ಕಪೋಲ ಕಾಣೆ
ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಾಣೆ ||
ನಂದಿಯ ಕೋಲು ಪತಾಕೆ ಕಾಣೆ
ಮತ್ತೊಂದೊಂದು ಪಾದದ ಶೌರ್ಯ ಕಾಣೆ ||
|| ಶಿವನು ಭಿಕ್ಷೆಗೆ ||
ಮೈಯೆಲ್ಲ ಹಾವಿನ ಮೊತ್ತ ಕಾಣೆ
ಬಲದ ಕೈಯಲ್ಲಿ ಹಿಡಿದ ನಾಗರಬೆತ್ತ ಕಾಣೆ ||
ವೈಯಾರ ಮೂರು ಲೋಕ ಕರ್ತ ಕಾಣೆ
ತಕ ಥೈಯ ಥೈಯಾನೊಂದೊಂದರ್ಥ ಕಾಣೆ ||
|| ಶಿವನು ಭಿಕ್ಷಕೆ ||
ಮನೆ ಮನೆ ದಪ್ಪಲೆ ದಿಮ್ಮಿ ಸಾಲೆ
ಆತ ಹಣವನ್ನು ಕೊಟ್ರು ಒಲ್ಲನಂತೆ ಕಾಣೆ ||
ತನಿವನ್ನ ನೀಡಬೇಕಂತೆ ಕಾಣೆ
ಗೌರಿ ಮನಸ ಬಿಟ್ಟಿರಲಾರನಂತೆ ಕಾಣೆ ||
|| ಶಿವನು ಬಿಕ್ಷಕೆ ||
***