ಕಮಲದ ಮೊಗದೋಳೆ
ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೋಳೆ ||
|| ಪ ||
ಕಮಲನಾಭನ ಹೃದಯಕಮಲದಲಿ ನಿಂತೋಳೆ |
ಕಮಲಿನಿ ಕರಮುಗಿವೆ ಬಾಮ್ಮ |
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ |
|| ಕಮಲದ ಮೊಗದೋಳೆ ||
ಕಾವೇರಿನೀರ ಅಭಿಷೇಕಕಾಗಿ
ನಿನಗಾಗಿ ನಾ ತಂದೆನಮ್ಮ |
ತಂಪನ್ನು ಚೆಲ್ಲೋ ಸುಮರಾಶಿಯಿಂದ ಹೂಮಾಲೆ ಕಟ್ಟಿರುವೆನಮ್ಮ |
ಬಂಗಾರ ಕಾಲ್ಗೆಜ್ಜೆನಾದ
ನಮ್ಮ ಮನೆಯೆಲ್ಲವ ತುಂಬುವಂತೆ ||
ನಲಿಯುತ ಕುಣಿಯುತ ಒಲಿದುಬಾ
ನಮ್ಮ ಮನೆಗೆ ಬಾ |
|| ಕಮಲದ ಮೊಗದೋಳೆ ||
ಶ್ರೀದೇವಿ ಬಾಮ್ಮ ಧನಲಕ್ಷ್ಮಿ ಬಾಮ್ಮ |
ಮನೆಯನ್ನು ಬೆಳಕಾಗಿ ಮಾಡು |
ದಯತೋರಿ ಬಂದು ಮನದಲ್ಲಿ ನಿಂತು
ಸಂತೋಷ ಸೌಭಾಗ್ಯ ನೀಡು |
ಸ್ಥಿರವಾಗಿ ಬಂದಿಲ್ಲಿ ನೆಲೆಸು
ತಾಯೆ ವರಮಹಾಲಕ್ಷ್ಮಿಯೇ ಹರಸು ||
ಕರವನು ಮುಗಿಯುವೆ
ಆರತಿ ಈಗ ಬೆಳಗುವೆ |
|| ಕಮಲದ ಮೊಗದೋಳೆ ||
|
***