ಹೂ ಬೇಕೇ ಪರಿಮಳದ ||
ಹೂ ಬೇಕೇ ಪರಿಮಳದ ||
ಪರಮ ಪುರುಷ ನಮ್ಮ ಕೃಷ್ಣನ ತೋಟದ ||
|| ಹೂ ಬೇಕೇ ||
|| ಹೂ ಬೇಕೇ ||
ದಾರದಿ ಕಟ್ಟಿಲ್ಲ ಮಾರು ಹಾಕುವದಲ್ಲ
ಕೇರಿಕೇರಿಗಳಲ್ಲಿ ಮಾರುವುದಲ್ಲ ||
ಭೂರಿಭಕುತಿಯೆಂಬ ಭಾರಿಯ ಬೆಲೆಗಿದ ||
ಮಾರೆಂದು ಪೇಳಿದ ಶೌರಿಯ ಸೊಬಗಿನ |
|| ಹೂ ಬೇಕೇ ||
|| ಹೂ ಬೇಕೇ ||
ರಂಗು ರಂಗುಗಳಿಂದ ಕಂಗೊಳಿಸುವ ಸ್ವಚ್ಛ
ಬಂಗಾರದ ಛವಿ ಭಂಗಿಸುವ ||
ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವನ ||
ಅಂಘ್ರಿಯ ಸಂಗದಿ ಮಂಗಳಕರವಾದ |
|| ಹೂ ಬೇಕೇ ||
|| ಹೂ ಬೇಕೇ ||
***
***