ಆವ ಕುಲವೋ ರಂಗಾ 

ಅರಿಯಲಾಗದೂ ||

ಅವ ಕುಲವೆಂದರಿಯಲಾಗದು

ಗೋವ ಕಾಯ್ವಾ ಗೊಲ್ಲನಂತೆ

ದೇವಲೋಕದ ಪಾರಿಜಾತವು

ಹೂವ ಸತಿಗೆ ತಂದನಂತೆ

|| ಆವ ಕುಲವೊ ||

ಗೋಕುಲದಲ್ಲಿ ಹುಟ್ಟಿದನಂತೆ

ಗೋವುಗಳನ್ನು ಕಾಯ್ದನಂತೆ ||

ಕೊಳಲನೂದಿ ಮೃಗಪಕ್ಷಿಗಳಾ

ಮರಳು ಮಾಡಿದನಂತೆ |

ತರಳತನದಿ ವರಳನಿಗಹೀ ಮರವ

ಮುರಿದು ಮತ್ತೆ ಹಾರಿ |

ತೆರೆದು ಬಾಯಿಯೊಳಗಿರೇಳು ಲೋಕವ ಇರಿಸಿ

ತಾಯಿಗೆ ತೋರ್ದನಂತೆ ||

|| ಆವ ಕುಲವೊ ||

ಗೊಲ್ಲತಿಯರಾ ಮನೆಯಪೊಕ್ಕು

ಕಳ್ಳತನವಾ ಮಾಡಿದನಂತೆ ||

ಒಲ್ಲದ ಪೂತನಿ ವಿಷವನುಂಡು

ಮೆಲ್ಲನೆ ತೃಣನಾ ಕೊಂದನಂತೆ

ಪಕ್ಷಿ ತನ್ನ ವಾಹನನಂತೆ 

ಹಾವು ತನ್ನ ಹಾಸಿಗೆಯಂತೆ |

ಮುಕ್ಕಣ್ಣ ತನ್ನ ಮೊಮ್ಮಗನಂತೆ

ಮುದ್ದು ಮುಖವಾ ಚೆಲ್ವನಂತೆ

|| ಆವ ಕುಲವೊ ||

ಕರಡಿ ಮಗಳ‌ ತಂದನಂತೆ

ಶರಧಿ ಮಗಳು ಮಡದಿಯಂತೆ ||

ಧರಣಿಯನ್ನು ಬೇಡಿದನಂತೆ

ಇರೇಳು ಲೋಕದಾ ಒಡೆಯನಂತೆ |

ಹಡಗಿನಿಂದಲಿ ಬಂದನಂತೆ

ಕಡಲ ದಡೆಯಲಿ ನಿಂದನಂತೆ |

ಒಡನೆ ಮದ್ವರಿಗೊಲಿದನಂತೆ

ಒಡೆಯಾ ಹಯವದನನಂತೆ ||

|| ಆವ ಕುಲವೊ ||

 || 

***