ಶರಣರ ಕಾಯೈ ಚಾಮುಂಡೇಶ್ವರಿ

ಶಂಕರಿ ಶಾರ್ವರಿ ಶ್ರೀ ಭುವನೇಶ್ವರಿ ||

|| ||

ಮಂಗಳದಾತೆ ಮಹಿಷಮರ್ದಿನಿ

ಗಂಗಾಧರ ಮನಮೋಹಿನಿ ||

ಶೂಲಧಾರಿಣಿ ವಿಶ್ವಕಾರಣಿ ||

ಸರ್ವಮಂಗಳೇ ಪಾಪವಿನಾಶಿನಿ

||ಶರಣರ||

ಕಾತ್ಯಾಯಿನಿ ಕರಿವಾಹಿನಿ

ಸರ್ವಾರ್ಚಿತೆ ಸುರಪೂಜಿತೆ ||

ಮಾಹೇಶ್ವರಿ ವಿಜಯಾಂಬಿಕೆ

ಸರ್ವಸಂಪದೆ ನಾರಾಯಣಿ

||ಶರಣರ||

***