ಧನ್ಯನಾದೆ ರಾಮ ಧನ್ಯನಾದೇ ||
ಧನ್ಯನಾದೆ ರಾಮ ಧನ್ಯನಾದೇ ||
|| ಪ ||
|| ಪ ||
ಧನ್ಯನಾದೆ ರಾಮ ನಿನ್ನ ಪಾದ ಕಮಲವನ್ನು ಕಂಡು ||
|| ಧನ್ಯನಾದೇ ||
|| ಧನ್ಯನಾದೇ ||
ಮುತ್ತಿನಂಥ ಲಕ್ಷ್ಮೀ ದೇವಿ
ಒತ್ತುವಂತ ನಿನ್ನ ಪಾದ ||
ಒತ್ತುವೆನು ಈಗ ನಾನು
ಮುಕ್ತನಾಗಿ ಬೇಡುವೆನೋ||
|| ಧನ್ಯನಾದೇ ||
|| ಧನ್ಯನಾದೇ ||
ತಮ್ಮನಾದ ಲಕ್ಷ್ಮಣನ
ನಿರ್ಮಲದಿ ಕೂಡಿಕೊಂಡು ||
ನೀವು ಮೂವರೊಂದಾಗಿ
ಹೋಗೋದೆಲ್ಲಿಗೇ ರಾಮ ||
|| ಧನ್ಯನಾದೆ ||
|| ಧನ್ಯನಾದೆ ||
ಇಂದು ನಮ್ಮ ಮನೆಯೊಳಿದ್ದು
ನಾಳೆ ಮುಂಜಾನೆ ಎದ್ದು ||
ನೀವು ಮೂವರೊಂದಾಗಿ
ಪೋಗಬೇಕಯ್ಯ ರಾಮ ||
|| ಧನ್ಯನಾದೇ ||
|| ಧನ್ಯನಾದೇ ||
***