ಕಮಲೇ ಕಮಲಾಲಯೇ ||

ಕಮಲಭವಾದಿಸುರ ವಂದಿತಪದೇ ||

|| ಕಮಲೇ ||

ತ್ರಿಗುಣಾಭಿಮಾನಿಯೇ ||

ನೀ ಅಗಣಿತಗುಣಶ್ರೇಣಿಯೇ ||

ಖಗವಾಹನನ ರಾಣಿಯೇ ನೀ ||

ಹಗಲು ಇರುಳು ಹರಿಪದಯುಗ ತೋರಿಸೆ ||

 || ಕಮಲೇ ||

ಲಿಂಗಶರೀರವ ಭಂಗವಗೈಯಲು ||

ನಿನ್ನಂಗದಲ್ಲಿನ ಬೆವರಿನ ||

ಸಂಗವಾಗಲು ಭವಭಂಗ ಹಿಂಗುವುದು ||

|| ಕಮಲೇ ||

ಧಾಮತ್ರಯರೂಪಿಣಿ ||

ಕಮಲ ಭವಾಂಡಕಾರಿಣಿ ||

ವಿಮಲಪದುಮ ಸರೋವಾಸಿನಿ ||

ಸ್ವಾಮಿತೀರ್ಥದಿ ನಿಂತ

ಶ್ರೀವೆಂಕಟೇಶನ ರಾಣಿ ||

|| ಕಮಲೇ ||


***