ಅಮ್ಮ ನಿನ್ನ ಪಾದಕಮಲಕೆ ದುಂಬಿಯಾಗಿ ಎರಗುವೆ
ಫಲ ಫುಷ್ಪವಾಗಿ ನಿನ್ನ ಪಾದಮೂಲ ಸೇರುವೆ ||
|| ಪ ||
ಭಕ್ತಿ ಎಂಬ ಜಲದಿ ಮಿಂದು ಆಸೆಗಳ ತೊರೆಯುವೆ
ನೀನಿತ್ತ ಸಕಲವನ್ನೂ ನಿನಗೇ ನೀಡುವೆ ||
ನನ್ನದೆಂಬ ಮೋಹಪಾಶ ಬಂಧ ಹರಿಯಲೆನ್ನುವೆ
ಬೇರೆ ಏನು ಬೇಡವು ಎನಗೆ ನಿನ್ನ ದಯವಾ ಬೇಡುವೆ
||ಅಮ್ಮ ನಿನ್ನ||
ಸತ್ಯಮಾರ್ಗದಲ್ಲಿ ನಡೆವ ಬುದ್ದಿಯನ್ನೆ ಕೋರುವೆ
ನಿತ್ಯ ಧರ್ಮಕರ್ಮಗಳಲಿ ನಿರತನಾಗಿ ಬಾಳುವೆ ||
ದಿನವೆಲ್ಲ ನಿನ್ನ ನಾಮದ ಅಮೃತವನ್ನೇ ಸವಿಯುವೆ
ನನ್ನನ್ನೇ ನಾನು ಮರೆತು ತಪ್ತನಾಗಿ ಬೇಡುವೆ |