|| ಗಣಪತಿಯೇ ಬುದ್ಧಿದಾತನೆ , ಸಿದ್ಧಿನಾಥನೆಸಲಹು ಗಣೇಶನೇ ವಿದ್ಯಾಧಿಪನೆ ||

ನೀ ನಮ್ಮ ಗೆಲುವಾಗಿ ಬಾ ,

ಗಜಮುಖನೇ ,

ನೀ ನಮ್ಮ ಗೆಲುವಾಗಿ ಬಾ || 

 || ಪ ||

ಗುರುಕುಲಕೆ ವರವಾಗಿ, ಗುರಿ ತೋರೋ ಗುರುವಾಗಿ,

ಪೊರೆ ನೀನು ಎಂದೆಂದೂ

ಕರುಣಾಳು ಬಾ ಬಂಧು

‌‌‌‌‌ || ನೀ ನಮ್ಮ ಗೆಲುವಾಗಿ ||

ಬಾಳಲ್ಲಿ ಒಂದಾಗಿ ಬಾ ನಮ್ಮ ಜೊತೆಯಾಗಿ,

ಕ್ಷಣವು ಕ್ಷಣವೂ ನಮಗಾಗಿ ನೆರವಾಗು ಬೆಳಕಾಗಿ ||

ದಯೆಯಿರಲಿ ನಮ್ಮಲ್ಲಿ ಗತಿ ನೀನೆ ಆದಿಯಲಿ

‌‌‌‌‌ || ನೀ ನಮ್ಮ ಗೆಲುವಾಗಿ ||

ನಿಧಿಯಾಗಿ , ವಿಧಿಯಾಗಿ, ಸುಧೆ ತುಂಬು ಒಲವಾಗಿ,

ಹಿರಿಯಾದ ಸಿರಿ ನೀನು, ಈ ಬಾಳ ಸವಿಜೇನು ||

ದಯೆಯಿರಲಿ ನಮ್ಮಲ್ಲಿ ಗತಿ ನೀನೆ ಆದಿಯಲಿ

‌‌‌‌‌ || ನೀ ನಮ್ಮ ಗೆಲುವಾಗಿ ||


***