ಶಾಸ್ತಾ ಬರುವ ನೋಡಾ
ಶಾಸ್ತಾ ಬರುವ ನೋಡಾ
ಶಬರಿಗಿರಿ ಶಾಸ್ತಾ ಬರುವ ನೋಡಾ ||
|| ಪ ||
|| ಪ ||
ಸಾಸ್ತಾ ಬರುವ ನೋಡು
ಹುಲಿಯ ಮೇಲೆ ಕುಳಿತುಕೊಂಡು
ಹಣೆಯ ಮೇಲೆ ಗಂಧವಿಟ್ಟು
ಕಂಠದಲ್ಲಿ ಮಣಿಯ ತೊಟ್ಟು ||
|| ಶಾಸ್ತಾ ಬರುವ ನೋಡಾ ||
|| ಶಾಸ್ತಾ ಬರುವ ನೋಡಾ ||
ಶಬರಿಗಿರಿಯ ಮೆಟ್ಟಿಲಲ್ಲಿ
ನೀಲಿಮಲೆಯ ಹಸಿರಿನಲ್ಲಿ
|ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಸ್ವಾಮಿಯೇ|
ಪೂರ್ಣ ಪ್ರಭೆಯ ರೂಪದಲ್ಲಿ
ಜ್ಯೋತಿಯಂತೆ ಬೆಳಕ ಚೆಲ್ಲಿ ||
|| ಶಾಸ್ತಾ ಬರುವ ನೋಡಾ ||
|| ಶಾಸ್ತಾ ಬರುವ ನೋಡಾ ||
ಪಂಪಾ ನದಿಯ ತೀರದಲ್ಲಿ
ಪುಣ್ಯ ಸ್ನಾನದ ವೇಳೆಯಲ್ಲಿ
ಪೂರ್ಣಚಂದ್ರನ ಕಾಂತಿಯಲ್ಲಿ
ಮುತ್ತಿನಂತ ನಗುವ ಚೆಲ್ಲಿ
|| ಶಾಸ್ತಾ ಬರುವ ನೋಡ ||
|| ಶಾಸ್ತಾ ಬರುವ ನೋಡ ||
ಆನೆಗಳಿಂಡಿನ ಘೀಳಿನಲ್ಲಿ
ಹುಲಿಗಳಿಂಡಿನ ಘರ್ಜನೆಯಲ್ಲಿ
| ದೇವನೇ ದೇವಿಯೇ ದೇವಿಯೇ ದೇವನೇ |
ಹಕ್ಕಿಗಳಿಂಪಿನ ಕಲರವದಲ್ಲಿ
ಗಾಳಿ ಬೀಸುವ ಮೆಲುದನಿಯಲ್ಲಿ ||
|| ಶಾಸ್ತಾ ಬರುವ ನೋಡಾ ||
|| ಶಾಸ್ತಾ ಬರುವ ನೋಡಾ ||
ಕೊಂಬು ಕಹಳೆ ನಾದದಲ್ಲಿ
ಚೆಂಡೆ ಮದ್ದಲೆ ಸದ್ದಿನಲ್ಲಿ
ಗಾನಶಾರದೆ ವೀಣೆಯಲ್ಲಿ
ನಾಟ್ಯರಾಜನ ಗೆಜ್ಜೆಯಲ್ಲಿ ||
|| ಶಾಸ್ತಾ ಬರುವ ನೋಡಾ ||
|| ಶಾಸ್ತಾ ಬರುವ ನೋಡಾ ||
ದೀಪದಾರತಿ ಬೆಳಕಿನಲ್ಲಿ
ತುಪ್ಪಗಂಧ ಘಮಘಮದಲ್ಲಿ
ಕರ್ಪೂರಧೂಪದ ಧೂಮ್ರದಲ್ಲಿ
ಶರಣು ಎನ್ನುವ ಘೋಷದಲ್ಲಿ ||
|| ಶಾಸ್ತಾ ಬರುವ ನೋಡಾ ||
|| ಶಾಸ್ತಾ ಬರುವ ನೋಡಾ ||