ಏನು ಧನ್ಯಳೋ ಲಕುಮಿ
ಎಂಥ ಮಾನ್ಯಳೋ ||
ಸಾನುರಾಗದಿಂದ ಹರಿಯ
ತಾನೇ ಸೇವೆ ಮಾಡುತಿಹಳು ||
|| ಏನು ಧನ್ಯಳೋ ||
ಕೋಟಿಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ ||
ಸಾಟಿಯಿಲ್ಲದೆ ಪೂರ್ಣಗುಣನ
ಶ್ರೇಷ್ಠವಾಗಿ ಮಾಡುತಿಹಳು ||
|| ಏನು ಧನ್ಯಳೋ ||
ಛತ್ರಚಾಮರ ವ್ಯಜನಪರ್ಯಂಕ
ಪಾತ್ರರೂಪದಲ್ಲಿ ನಿಂತು ||
ಚಿತ್ರಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳು ||
|| ಏನು ಧನ್ಯಳೋ ||
ಸರ್ವಸ್ಥಳದಿ ವ್ಯಾಪ್ತನಾದ
ಸರ್ವದೋಷರಹಿತನಾದ ||
ಗರುಡಗಮನನು ಆದ ಪುರಂದರ
ವಿಠ್ಠಲನ್ನ ಸೇವಿಸುವಳು ||