ಪಂಡರಾಪುರವೆಂಬ ದೊಡ್ಡ ನಗರ

ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || 

|| ಪ ||

ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ || 

|| ಪ ||

ವಿಠೋಬನಿರುವುದು ನದಿತೀರ ||

ಅಲ್ಲಿ ಪಂಡರೀ ಭಜನೆ ವ್ಯಾಪಾರ |

|| ಪಂಡರಾಪುರವೆಂಬ ||

ತಂದೆ ನೀನೇ ತಾಯಿ ನೀನೇ ಪಾಂಡುರಂಗ 

ನಮ್ಮ ಬಂಧು ನೀನೆ ಬಳಗ ನೀನೆ ಪಾಂಡುರಂಗ ||

ಭಕ್ತರ ಪೋಷಕ ಪಾಂಡುರಂಗ ||

ನಮ್ಮ ಮುಕ್ತಿದಾಯಕ ಪಾಂಡುರಂಗ‌ |

|| ಪಂಡರಾಪುರವೆಂಬ ||

ವಿಠೋಬನಿಗೆ ಪ್ರಿಯ ತುಳಸಿಹಾರ

ಅಲ್ಲಿ ಭಕ್ತ ಜನರ ವ್ಯಾಪಾರ ||

ವಿಠೋಬನಿಗೆ ಪ್ರಿಯ‌ ಬುಕ್ಕಿಯ ಗಂಧ

ಅಲ್ಲಿ ಚಂದ್ರಭಾಗಾ ಸ್ನಾನ ಬಲುಅಂದ ||

|| ಪಂಡರಾಪುರವೆಂಬ ||

ಶ್ರೀಹರಿ ವಿಠಲ ಪಾಂಡುರಂಗ

ಜಯಹರಿ ವಿಠಲ ಪಾಂಡುರಂಗ ||

ವಿಠಲ ವಿಠಲ ಪಾಂಡುರಂಗ 

ನಮ್ಮ ಪುರಂದರವಿಠಲ ಪಾಂಡುರಂಗ‌ ||

|| ಪಂಡರಾಪುರವೆಂಬ ||

***