|| ಬೆನಕ ಬೆನಕ ಏಕದಂತ…

ಪಚ್ಚೆ ಕಲ್ಲು ಪಾಣಿಪೀಠ

ಮುತ್ತಿನುಂಡೆ ಹೊನ್ನ ಘಂಟೆ ಒಪ್ಪುವ

ಗುಡ್ಡಬೆಟ್ಟದಲಿ ತಂಬಿಟ್ಟು ಮುಕ್ಕುವ

ಪುಟ್ಟ ವಿಘ್ನೇಶ ದೇವರಿಗೆ

ಇಪ್ಪತ್ತೊಂದು ನಮಸ್ಕಾರಗಳು ||



ಬೆಳಗಾಯ್ತು ಏಳು ಹೇ ಮುದ್ದುಬೆನಕ

ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ || 

|| ಪ ||

ಅಂಬಾಪ್ರಿಯತನಯ ಆದಿ ಪೂಜಿತನೆ

ಮೂಡಣದೆ ರವಿಯೆದ್ದ ನೀ ಏಳು ಬೆನಕ

||ಬೆಳಗಾಯ್ತು‌ ಏಳು||

ಮಾಮರದಿ ಕೋಗಿಲೆಯು ಪಚ್ಚವರ್ಣದ ಗಿಳಿಯು

ಸುಪ್ರಭಾತವ ನಿನಗೆ ಹಾಡುತಿವೆ ಬೆನಕ ||

ಆ ನಿನ್ನ ಸುಂಡಿಲಿಯು ನಿನ್ನ ಬರುವನು ಕಾದು ||

ಕಾಳುಗಳ ತಿನ್ನುತಲಿ ಕುಳಿತಿಹುದು ಬೆನಕ

||ಬೆಳಗಾಯ್ತು‌ ಏಳು||

ಹುಲ್ಲುಗರಿಕೆಯು ಧೂರ್ವೆಯಾಗಿ ಕಾದಿಹುದು 

ಪೂಜೆಯಲಿ ನಿನ್ನ ಅಲಂಕರಿಸಲೆಂದು |

ನಾಗಲಿಂಗದ ಪುಷ್ಪಕಮಲಗಳು ಕಾದಿಹವು ||

ಗಣಪತಿಯ ಅರ್ಚನೆಗೆ ಸಿಧ್ಧವಾಗಿಹೆವೆಂದು

||ಬೆಳಗಾಯ್ತು ಏಳು||

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ

ಕಾಯುತಿವೆ ನಿನ್ನ ಸ್ವೀಕಾರಕಾಗಿ ||

ನಿನ್ನ ಪೂಜೆಯ ಮಾಡೆ ಭಕ್ತಜನ ವೃಂದ ||

ಕಾದಿಹುದು ನಿನ್ನ ವರ‌ ಭಿಕ್ಷೆಗಾಗಿ

||ಬೆಳಗಾಯ್ತು‌ ಏಳು||

***