ಗುರುವಾರ ಬಂತಮ್ಮ |

ಗುರುರಾಯರ ನೆನೆಯಮ್ಮ |

ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ ||


ವಾರ ಬಂತಮ್ಮ  ಗುರುವಾರ ಬಂತಮ್ಮ ||

ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ || ಪ||

 ||ವಾರ ಬಂತಮ್ಮ||

ಯೋಗಿ ಬರುವನಮ್ಮ  ಶುಭ ಯೋಗ ಬರುವುದಮ್ಮ||

ರಾಘವೇಂದ್ರ ಗುರುರಾಯ ಬಂದು ಭವರೋಗ ಕಳೆವನಮ್ಮ||

 ||ವಾರ ಬಂತಮ್ಮ||

ಮನವ ತೊಳೆಯಿರಮ್ಮ ಭಕ್ತಿಯ ಮನೆಯ ಹಾಕಿರಮ್ಮ||

ದ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ||

 ||ವಾರ ಬಂತಮ್ಮ||

ಕೋಪ ಅರಿಯನಮ್ಮ  ಯಾರನು ದೂರ ತಳ್ಳನಮ್ಮ||

ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ||

 ||ವಾರ ಬಂತಮ್ಮ||

ಹಿಂದೆ ಬರುವನಮ್ಮ  ರಾಯರ ನೆರಳಿನಂತೆ ಹನುಮ||

ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ||

 ||ವಾರ ಬಂತಮ್ಮ||

***