ನಾಗರೂಪ ಧರಿಸಿಬಂದ ಮಂಗಳಾಂಗನೆ
ನಾದಪ್ರಿಯನೆ ವೇದಮಯನೆ ನಿನಗೆ ವಂದನೆ ||
|| ಪ ||
ನಾದಬಿಂದು ಕಲಾತೀತ ಯೋಗಿವರ್ಯನೇ||
ದೇವಸೇನೆ ವಲ್ಲಿಯೊಡನೆ ನಲಿವ ದೇವನೇ||
|| ನಾಗರೂಪ ಧರಿಸಿಬಂದ ||
ದೇವಿ ಉಮೆಯ ಸಾಂಬಶಿವನ
ಪ್ರಿಯಕುಮಾರನೆ
ದೇವ ಗಣವ ರಕ್ಷಿಸಿದ ಧೀರ ನೀನೇ ||
ದೈತ್ಯಶಕ್ತಿ ಧಮನವಾಗೆ ಮಹಿಮೆ ತೋರಿದೆ ||
ಬಾಲ ಸುಬ್ರಹ್ಮಣ್ಯ ನಿನ್ನ ತೇಜ ಬೆಳಗಿದೆ ||
|| ನಾಗರೂಪ ಧರಿಸಿಬಂದ ||
ನಿನ್ನ ಕರುಣೆಧಾರೆಯೇ ಕುಮಾರಧಾರೆ
ನೀನು ಗುರುವೇ ಆಗಿ ಬಂದೆ ದಾರಿ ತೋರೆ ||
ಜ್ಞಾನರೂಪರಾಶಿಯೇ ಗುಹನು ತಾನೇ
ಆರುಮುಖದ ಸ್ವಾಮಿಗೆ ಸಾಟಿ ಕಾಣೆ ||
|| ನಾಗರೂಪ ಧರಿಸಿಬಂದ ||
***