ಕಣ್ಣುಗಳೆರಡು ಸಾಲದಮ್ಮ ಲಕ್ಷ್ಮಿ ನಿನ್ನ ನೋಡಲು

ನಾಲಿಗೆ ಹೊರಳಿ ನುಡಿಯದಮ್ಮ ನಿನ್ನ ಗಾನವ  ಪಾಡಲು ||

ಯಾವ  ಭಾವದಿ  ಯಾವ ರಾಗದಿ

ಹಾಡಿ ಪಾಡಲಿ ನಿನ್ನಯ ತಾಯಿ |

|| ಪ ||

ಶರಣಾಗತವರದೇ ವರದೇವಿ ಕರುಣಸದಯೇ

ಸುರವರ ಪೂಜಿತೆಯೇ ಕರವೀರ ಪುರಾನಿಲಯೇ ||

ದುರಿತ ನಿವಾರಿಣಿ ಭವಭಯಹಾರಿಣಿ ||

ಮಂಗಳದಾಯಿನಿ ನಾರಾಯಣಿ |

|| ಕಣ್ಣುಗಳೆರಡು ಸಾಲದಮ್ಮ ||

ಪನ್ನಗ ಫಣಿವೇಣಿ ಪದ್ಮಾಸಿನಿ ಹರಿರಾಣಿ

ಪದ್ಮಗದಾಪಾಣಿ ಪರಮಗುಣಾ ಸುಗುಣಿ ||

ಇಂದಿರನಯನೇ ಚಂದಿರವದನೇ ||

ಅನುಪಮ ಸುಂದರಿ ನಾರಾಯಣಿ |

|| ಕಣ್ಣುಗಳೆರಡು ಸಾಲದಮ್ಮ ||

ಧನ ಕನಕವ ಕೊಡುವ ಧನ ಲಕ್ಷ್ಮಿಯು ನೀನಾಗಿ 

ಧರೆಯಲಿ ನೆಲೆಸಿರುವೆ ದೀನರ ರಕ್ಷಿಸಲು ||

ಸಂಕಟ ಹರಿಸುವ ವೆಂಕಟರಮಣಿ ||

ಆರ್ತಪರಾಯಣಿ ನಾರಾಯಣಿ |

|| ಕಣ್ಣುಗಳೆರಡು ಸಾಲದಮ್ಮ ||

***