ಅಮ್ಮ ನಿನ್ನ ನಾಮದಿಂದ ಜನುಮ ಪಾವನ
ಅಮ್ಮ ನಿನ್ನ ಧ್ಯಾನವೊಂದೇ ಮುಕುತಿ ಸಾಧನ
|| ಅಮ್ಮ ನಿನ್ನ ನಾಮದಿಂದ ||
ಶಾರದಾಂಬೆ ಜಯ ಜಗದಂಬೆ
ಶಾರದಾಂಬೆ ಜಗದಂಬೆ ನಿನ್ನನೆ ನಂಬಿದೆ ||
ನೀರಜಾಕ್ಷಿ ಕರುಣದಿ
ಹರಸು ಎನುತ ಬೇಡುವೆ ||
|| ಅಮ್ಮ ನಿನ್ನ ನಾಮದಿಂದ ||
ದೂರ ದೂರ ದೂರ ಇರುವ ಬಾಳತೀರಕೆ
ಸಾರ ಸವಿಯು ಸೇರಿರುವಂತ ಪ್ರೇಮದೂರಿಗೆ ||
ಬೀರಿ ನಿನ್ನ ನಗುವಿನ
ಹೊನಲು ನವ್ಯಲೋಕಕೆ ||
ದಾರಿ ತೋರು ಭಕುತಗೆ
ಸತತ ಹೃದಯನಾದಕೆ ||
||ಅಮ್ಮ ನಿನ್ನ ನಾಮದಿಂದ ||
ಮನೆ ಮಡದಿ ಮಕ್ಕಳು ಎನ್ನುವ ಭಾವ ಉಳಿಯಲಿ
ಕನಸ ಸ್ವರ್ಗನಾಶವಾಗಿ ಉರಿದು ಹೋಗಲಿ ||
ಮನವು ಕರ್ಮಫಲವನು
ಬಯಸದೆ ನಿನ್ನ ಹಾಡಲಿ ||
ದಿನವು ದಾನ ಧರ್ಮಗೈವ ಮನವು ನನ್ನದಾಗಲಿ ||
|| ಅಮ್ಮ ನಿನ್ನ ನಾಮದಿಂದ ||