ರಾಮ ಗೋವಿಂದ ಹರೇ ಕೃಷ್ಣ ಗೋವಿಂದ
ದಾಮೋದರ ಹರಿ ವಿಷ್ಣು ಮುಕುಂದ
|| ಪ ||
ಮಚ್ಚವತಾರದೊಳಾಡಿದನೆ
ಮಂದರಾಚಲವ ಬೆನ್ನೊಳು ಆಂತವನೆ
ಅಚ್ಚಸೂಕರನಾಗಿ ಬಾಳಿದನೆ
ಮದ ಹೆಚ್ಚಿ ಹಿರಣ್ಯನ ಸೀಳಿದನೆ ||
|| ರಾಮ ಗೋವಿಂದ ||
ಬಲಿಯೊಳು ದಾನವ ಬೇಡಿದನೆ
ಕ್ಷಾತ್ರ ಕುಲವ ಬಿಡದೆ ಕ್ಷಯ ಮಾಡಿದನೆ
ಜಲನಿಧಿಗೆ ಬಿಲ್ಲ ಹೂಡಿದನೆ
ಕಾಮಗೊಲಿದು ಗೊಲ್ಲತಿಯೋಳ್ ಆಡಿದನೆ ||
|| ರಾಮ ಗೋವಿಂದ ||
ಸಾಧಿಸಿ ತ್ರಿಪುರರ ಗೆಲಿದವನೆ
ಪ್ರತಿವಾದಿಸಿ ಹಯವೇರಿ ನಲಿದವನೆ
ಭೇದಿಸಿ ವಿಶ್ವವ ಗೆಲಿದವನೆ
ಬಡದಾದಿ ಕೇಶವರಾಯ ನಮಗೆ ಒಲಿದವನೆ ||
|| ರಾಮ ಗೋವಿಂದ ||
***