ದಾರಿ ಕಾಣದಾಗಿದೆ ರಾಘವೇಂದ್ರನೇ
ಬೆಳಕ ತೋರಿ ನಡೆಸು ಬಾ ಯೋಗಿವರ್ಯನೇ ||
|| ದಾರಿ ಕಾಣದಾಗಿದೆ ||
ಮನದ ಆಸೆ ತಿಳಿಸುವಾಸೆ ಹೇಗೆ ಹೇಳಲಿ
ನಾಳೆ ಹೇಗೆ ಎಂಬ ಚಿಂತೆ ಇಂದು ಎದೆಯಲಿ ||
ಕಲ್ಲು ಮುಳ್ಳು ಏನೇ ಇರಲಿ ಬಾಳ ಹಾದಿಲಿ
ನಿನ್ನ ಕರುಣೆಯಿಂದ ಎಲ್ಲ ಸುಮಗಳಾಗಲಿ ||
|| ದಾರಿ ಕಾಣದಾಗಿದೆ ||
ಯಾರ ಯಾರ ಸೇರಿಸುವೆಯೋ ಯಾರು ಅರಿಯರು
ಯಾರ ನಗಿಸಿ ಅಳಿಸುವೆಯೋ ಯಾರು ಬಲ್ಲರು ||
ನೀನು ಕುಣಿಸಿದಂತೆ ತಾನೇ ಎಲ್ಲ ಕುಣಿವರು
ಜ್ಯೋತಿ ನೀನು ಬರಿಯ ಮಣ್ಣ ಹಣತೆ ಎಲ್ಲರೂ ||
|| ದಾರಿ ಕಾಣದಾಗಿದೆ ||
***