ಇವಳೇ ವೀಣಾಪಾಣಿ |

ವಾಣಿ ತುಂಗಾತೀರ ವಿಹಾರಿಣಿ |

ಶೃಂಗೇರಿ ಪುರವಾಸಿನಿ ||      ||ಪ||

||ಇವಳೇ ವೀಣಾಪಾಣಿ||

ಶಾರದಾ ಮಾತೆ ಮಂಗಳದಾತೆ  

ಸುರ ಸಂಸೇವಿತೆ ಪರಮ ಪುನೀತೆ ||

ವಾರಿಜಾಸನ ಹೃದಯ ವಿರಾಜಿತೆ ||

ನಾರದ ಜನನಿ ಸುಜನ ಸಂಪ್ರಿತೇ |

||ಇವಳೇ ವೀಣಾಪಾಣಿ||

ಆದಿ ಶಂಕರ ಅರ್ಚಿತೇ ಮಧುರೆ

ನಾದ ಪ್ರಿಯೆ ನವಮಣಿಮಯ ಹಾರೆ ||

ವೇದ ಅಖಿಲ ಶಾಸ್ತ್ರಾ ಆಗಮ ಸಾರೆ ||

ವಿದ್ಯಾ ದಾಯಿನಿ ಯೋಗ ವಿಚಾರೆ |

||ಇವಳೇ ವೀಣಾಪಾಣಿ||

***