ಎಂದು ಕಾಣುವೇ ಗುರುವೇ
ದೊರೆಯೇ ||
ಎಂದು ಕಾಣುವೆ ನಿನ್ನ ಚಂದಿರ ಮುಖಸಿರಿ ||
ತಂದೆ ಶ್ರೀ ರಾಘವೇಂದ್ರ ಇಂದು ದಯವ ತೋರೋ
|| ಎಂದು ಕಾಣುವೇ ||
ಘೋರ ಸಂಸಾರದಲಿ ಜಾರಿ ಹೋಯಿತು ಕಾಲ ||
ಸಾರಿ ಕೇಳುವ ಸುಕುಮಾರ ಪ್ರಹ್ಲಾದ ನಿನ್ನ ||
|| ಎಂದು ಕಾಣುವೇ ||
ನಾನಾ ರೋಗಗಳಲ್ಲಿ ಕ್ಷೀಣವಾಯಿತು ದೇಹ ||
ಏನು ಸ್ಥಿರವೋ ತನು ಮೌನಿವ್ಯಾಸನೇ ನಿನ್ನ ||
|| ಎಂದು ಕಾಣುವೇ ||
ಕ್ಲೇಶಕಷ್ಟಗಳಲ್ಲಿ ಮಾಸಿ ಹೋಯಿತು ಬುದ್ಧಿ ||
ದೇಶಿಕವರ ವಿಠಲೇಶ ದಾಸನೆ ನಿನ್ನ ||
|| ಎಂದು ಕಾಣುವೇ ||
***