ವೆಂಕಟಾಚಲ ನಿಲಯಂ 

ವೈಕುಂಠಪುರ ವಾಸಂ ||

|| ಪ ||

ಪಂಕಜನೇತ್ರಂ ಪರಮಪವಿತ್ರಂ ||

ಶಂಖಚಕ್ರಧರ ಚಿನ್ಮಯರೂಪಂ ||

||ವೆಂಕಟಾಚಲ ನಿಲಯಂ||

ಅಂಬುಜೋದ್ಭವ ವಿನುತಂ ಅಗಣಿತ ಗುಣನಾಮಂ ||

ತುಂಬುರುನಾರದ ಗಾನವಿಲೋಲಂ ||

|| ವೆಂಕಟಾಚಲ ನಿಲಯಂ||

ಮಕರಕುಂಡಲಧರ ಮದನಗೋಪಾಲಂ ||

ಭಕ್ತಪೋಷಕ ಶ್ರೀಪುರಂದರವಿಠಲಂ || 

|| ವೆಂಕಟಾಚಲ ನಿಲಯಂ||


***